ಅಭಿಪ್ರಾಯ / ಸಲಹೆಗಳು

ಮೆಟ್ರಿಕ್-ನಂತರ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ

ಮೆಟ್ರಿಕ್-ನಂತರ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ
ಯೋಜನೆ ಉದ್ದೇಶ ಮತ್ತು ಅರ್ಹತಾ ವಿದ್ಯಾರ್ಥಿವೇತನದ ದರಗಳು:

ಅಲೆಮಾರಿ/ಅರೆ ಅಲೆಮಾರಿ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಶಿಕ್ಷಣವನ್ನು ಮುಂದುವರೆಸಲು ಹಾಗೂ ಈ ಹಂತದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ವಿದ್ಯಾಲಯದಿಂದ ಅಂಗೀಕೃತವಾದ ಕೋರ್ಸಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅವರು ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿರುವಅಂಕಗಳಅರ್ಹತೆಯ ಆಧಾರದ ಮೇಲೆ ಈ ಕೆಳಕಾಣಿಸಿದ ದರಗಳಲ್ಲಿ ಅರ್ಹತಾ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುವುದು.

ಮೆಟ್ರಿಕ್ ನಂತರದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಕಾಲೇಜು ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿವೇತನವನ್ನು ಈ ಕೆಳಕಾಣಿಸಿದ ದರಗಳಲ್ಲಿ ಮಂಜೂರು ಮಾಡಲಾಗುತ್ತಿದೆ.

ಕ್ರ.ಸಂ ವಿವರ ಮಾಸಿಕ ವಿದ್ಯಾರ್ಥಿವೇತನದ ಅವಧಿ ಒಟ್ಟು ಮೊತ್ತ (ರೂ.ಗಳಲ್ಲಿ)
1 ಪಿ.ಯು.ಸಿ. ಮತ್ತು ಡಿಪ್ಲೊಮಾ ರೂ.300/- 10 ತಿಂಗಳಿಗೆ 3000/-
2 ಪದವಿ ಮತ್ತು ಸ್ನಾತಕೋತ್ತರ ಪದವಿ ರೂ.400/- 10 ತಿಂಗಳಿಗೆ 4000/-
3 ಸಿಇಟಿ ಮೂಲಕ ಸರ್ಕಾರಿ ಕೋಟಾದಲ್ಲಿ ಬಿ.ಇ, ಎಂ.ಬಿ.ಬಿ.ಎಸ್., ಬಿ.ಡಿ.ಎಸ್., ತತ್ಸಮಾನವಾದ ಇನ್ನಿತರ ತಾಂತ್ರಿಕ/ವೃತ್ತಿಪರ ಕೋರ್ಸುಗಳಿಗೆ ರೂ.500/- 10 ತಿಂಗಳಿಗೆ 5000/-
ಅರ್ಹತೆ:

1. ವಿದ್ಯಾರ್ಥಿಯು ಹಿಂದುಳಿದ ವರ್ಗಗಳಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡಗಳಿಗೆ ಸೇರಿರಬೇಕು. (ಹಾಲಿ ಚಾಲ್ತಿಯಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರಲ್ಲಿ ಸೇರಿಸಲ್ಪಟ್ಟಿರಬೇಕು ಹಾಗೂ ದಿನಾಂಕ: 01-02-1966ರ ಆದೇಶದಲ್ಲಿ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡಗಳೆಂದು ಗುರ್ತಿಸಲ್ಪಟ್ಟಿರಬೇಕು)

2. ಅಭ್ಯರ್ಥಿಯುಈ ಯೋಜನೆಯ ಸೌಲಭ್ಯಕ್ಕೆ ಪ್ರಥಮವಾಗಿ ಅರ್ಜಿ ಸಲ್ಲಿಸಲು ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3. ಈ ಅರ್ಹತಾ ವಿದ್ಯಾರ್ಥಿ ವೇತನದ ನವೀಕರಣಕ್ಕೆ ವಿದ್ಯಾರ್ಥಿಯು ಹಿಂದಿನ ತರಗತಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.

4. ವಿದ್ಯಾರ್ಥಿಯು ಪೋಷಕರ/ಪಾಲಕರ ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷಗಳಿಗಿಂತ ಮೀರಿರಬಾರದು.

5. ವಿದ್ಯಾರ್ಥಿಯು ಸರ್ಕಾರದಿಂದ/ವಿಶ್ವವಿದ್ಯಾಲಯದಿಂದ ಇನ್ಯಾವುದೇ ವಿದ್ಯಾರ್ಥಿವೇತನ ಅಥವಾ ಉಚಿತ ವಿದ್ಯಾರ್ಥಿನಿಲಯ ಸೌಲಭ್ಯ ಪಡೆದಿರಬಾರದು.

ಮಂಜೂರಾತಿ ವಿಧಾನ:

1. ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ, ಪರಿಶೀಲನೆ ನಂತರ ಅರ್ಹ ವಿದ್ಯಾರ್ಥಿಗಳಿಗೆ ಮಂಜೂರಾತಿ ನೀಡಲಾಗುವುದು.

2. ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿ ವೇತನ ಮೊತ್ತವನ್ನು ಜಮಾ ಮಾಡಲಾಗುವುದು.

ಇತ್ತೀಚಿನ ನವೀಕರಣ​ : 09-09-2020 02:56 PM ಅನುಮೋದಕರು: BCWD ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080