ಅಭಿಪ್ರಾಯ / ಸಲಹೆಗಳು

NEET ಹಾಗೂ JEE ಪರೀಕ್ಷಾ ಪೂರ್ವ ತರಬೇತಿ

ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ NEET ಹಾಗೂ JEE ADVANCED AND MAINS ಪರೀಕ್ಷಾ ಪೂರ್ವ ತರಬೇತಿ

ನಿಗದಿಪಡಿಸಿರುವ ಅರ್ಹತೆಗಳು:
1.ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಅರ್ಹತೆಗಳು:-ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಅಥವಾ 3(ಬಿ) ಗೆ ಸೇರಿರಬೇಕು.
2. ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ ರೂ.6.00 ಲಕ್ಷಗಳು
3. ವಿದ್ಯಾರ್ಹತೆ:- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸದರಿ ಪರೀಕ್ಷಾ ಪೂರ್ವ ತರಬೇತಿಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ/10ನೇ ತರಗತಿ ಪೂರ್ಣಗೊಳಿಸಿರಬೇಕು. ತರಬೇತಿಗೆ ಎಸ್.ಎಸ್.ಎಲ್.ಸಿ/10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. .
4. ಅರ್ಹ ಆಸಕ್ತ ವಿದ್ಯಾರ್ಥಿಗಳು ON-LINE ಮೂಲಕವೇ ಅರ್ಜಿಗಳನ್ನು ಸಲ್ಲಿಸುವುದು. ಬೇರೆ ಯಾವ ಪ್ರಕಾರಗಳಲ್ಲೂ ಸಲ್ಲಿಸುವ ವಿದ್ಯಾರ್ಥಿಯ ಅರ್ಜಿಯನ್ನಾಗಲಿ ಅಥವಾ ಮನವಿಯನ್ನಾಗಲಿ ಪರಿಗಣಿಸಲಾಗುವುದಿಲ್ಲ.ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ವಿದ್ಯಾರ್ಥಿಯು 20 ವರ್ಷ ಮತ್ತು ಅದಕ್ಕೂ ಕಡಿಮೆ ವಯೋಮಿತಿ ಹೊಂದಿರಬೇಕು.
5. CBSE ಮತ್ತುICSE ಹಾಗೂ ಇತರೆ ರಾಜ್ಯಗಳಲ್ಲಿ (1 ರಿಂದ 10ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಲ್ಲಿ ಮಾತ್ರ) ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಮತ್ತು ಸದರಿ ಕಾರ್ಯಕ್ರಮದಡಿ ತರಬೇತಿಗೆ ಅರ್ಹರಿರುವ ವಿದ್ಯಾರ್ಥಿಗಳು ತಮ್ಮ ಹತ್ತನೇ ತರಗತಿಯ ಮೂಲ ಅಂಕಪಟ್ಟಿಯೊಂದಿಗೆ ಹತ್ತಿರದ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಅಂಕಪಟ್ಟಿಯ ವಿವರವನ್ನುentry ಮಾಡಿಸಿ, ನಂತರ ಅರ್ಜಿ ಸಲ್ಲಿಸುವುದು..
6. ತರಬೇತಿ ಅವಧಿ: ಪ್ರಥಮ ವರ್ಷದಲ್ಲಿ ತರಬೇತಿಗೆ ಆಯ್ಕೆಯಾಗುವ ವಿದ್ಯಾರ್ಥಿಗೆ ಪ್ರಥಮ/10+1 ಹಾಗೂ ದ್ವಿತೀಯ ಪಿ.ಯು.ಸಿ/10+2ಗೆ ಸಂಬಂಧಿಸಿದಂತೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು..
7. ಭೌತಿಕ ಗುರಿಯನ್ನು ಅನುದಾನ ಲಭ್ಯತೆಗನುಗುಣವಾಗಿ ನಿಗದಿಪಡಿಸಲಾಗುವುದು. ಪ್ರವರ್ಗವಾರು ಮೀಸಲಾತಿ ಈ ಕೆಳಗಿನಂತಿರುತ್ತದೆ..
ನಿಗದಿಪಡಿಸಿರುವ ಮೀಸಲಾತಿ
ಪ್ರವರ್ಗ ಶೇಕಡವಾರು
ಪ್ರವರ್ಗ-1 15%
ಪ್ರವರ್ಗ-2ಎ 53%
ಪ್ರವರ್ಗ-3ಎ 15%
ಪ್ರವರ್ಗ-3ಬಿ 17%
ಒಟ್ಟು 100%

ಇತ್ತೀಚಿನ ನವೀಕರಣ​ : 29-10-2022 02:26 PM ಅನುಮೋದಕರು: BCWD ADMIN



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080