ಅಭಿಪ್ರಾಯ / ಸಲಹೆಗಳು

ಖಾಸಗಿ ಅನುದಾನಿತ ಅನಾಥಾಲಯಗಳು

ಖಾಸಗಿ ಅನುದಾನಿತ ಅನಾಥಾಲಯಗಳು

(ಲೆಕ್ಕಶೀರ್ಷಿಕೆ ಜಿಲ್ಲಾವಲಯ ಯೋಜನೇತರ 2225-00-103-0-73)
(2020-21ನೇ ಸಾಲಿನ ಆಯವ್ಯಯ ರೂ.738.00 ಲಕ್ಷಗಳು)

ಅನಾಥ ಮತ್ತು ನಿರ್ಗತಿಕ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅನಾಥಾಲಯಗಳನ್ನು ನಡೆಸುತ್ತಿವೆ.ಈ ಅನಾಥಾಲಯಗಳಲ್ಲಿ ಮಕ್ಕಳನ್ನು ಅವರ ಪ್ರೌಢ ಶಾಲಾ ಶಿಕ್ಷಣ ಮುಗಿಯುವವರೆಗೆ ಪೋಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ಇಂತಹ ಅನಾಥಾಲಯಗಳಿಗೆ ಪ್ರೋತ್ಸಾಹ/ನೆರವು ನೀಡುವ ದೃಷ್ಠಿಯಿಂದ ಸಹಾಯಧನ ಮಂಜೂರಾತಿಗೆ ಮನವಿ ಸಲ್ಲಿಸುವ ಸಂಸ್ಥೆಗಳಿಗೆ ಮಾನ್ಯತೆ ನೀಡಿ ಸಹಾಯಧನ ಮಂಜೂರು ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ರಾಜ್ಯದಲ್ಲಿ ಇಂತಹ ಒಟ್ಟು 54 ಖಾಸಗಿ ಅನಾಥಾಲಯಗಳಿವೆ. ಅವುಗಳಲ್ಲಿ ಒಟ್ಟು ನಿಲಯಾರ್ಥಿಗಳ ಮಂಜೂರಾತಿ ಸಂಖ್ಯೆ 7686. ಮಾಹೆಯಾನ ರೂ.800/-ರ ದರದಲ್ಲಿ ವರ್ಷದ 12 ತಿಂಗಳುಗಳಿಗೆ ಆಹಾರದ ಬಾಬ್ತು ಸಹಾಯಧನ ಮಂಜೂರು ಮಾಡಲಾಗುತ್ತದೆ.
ನಿಬಂಧನೆಗಳು
1.ಅನಾಥ ವಿದ್ಯಾರ್ಥಿಗಳಿಗೆ ಆದಾಯಮಿತಿ ಇರುವುದಿಲ್ಲ.
2.ನಿರ್ಗತಿಕ ವಿದ್ಯಾರ್ಥಿಗಳು ವಾರ್ಷಿಕ ಆದಾಯಮಿತಿ- ಪ್ರವರ್ಗ-1 ರೂ.1.00 ಲಕ್ಷ ಪ್ರವರ್ಗ-2ಎ, 2ಬಿ, 3ಎ, ಮತ್ತು 3ಬಿ - ರೂ.44,500/- ನಿಗದಿಪಡಿಸಿದೆ.
3.1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ನಿರ್ಗತಿಕ ಹಾಗೂ ಅನಾಥ ಮಕ್ಕಳು ಸೌಲಭ್ಯಕ್ಕೆ ಅರ್ಹರು.
4.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.800/-ರಂತೆ 12 ತಿಂಗಳ ಅವಧಿಗೆ ಆಹಾರ ವೆಚ್ಚ ನೀಡಲಾಗುವುದು.

ಇತ್ತೀಚಿನ ನವೀಕರಣ​ : 01-02-2021 06:46 PM ಅನುಮೋದಕರು: BCWD ADMIN



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080